Followers

Monday, February 25, 2019

ದೇವರು ಒಂದು ದಿನ ಕತ್ತೇನ ಸೃಷ್ಠಿಸಿ ಅದರ ಹತ್ತಿರ ಹೇಳಿದ ಕಥೆ

ದೇವರು ಒಂದು ದಿನ ಕತ್ತೇನ ಸೃಷ್ಠಿಸಿ ಅದರ ಹತ್ತಿರ ಹೇಳಿದ.ನೀನು ಒಂದು ಕತ್ತೆ  ಬೆಳಗಿನಿಂದ ಸಾಯಂಕಾಲದ ವರೆಗೆ ನೀ ದುಡಿಯ ಬೇಕು ನಿನ್ನ ಬೆನ್ನ ಮೇಲೆ ಭಾರ ಇರುತ್ತೆ. ನೀನು ಹುಲ್ಲನ್ನೇ ತಿನ್ನಬೇಕು ನಿನಗೆ ಅಷ್ಟೊಂದು ಬುದ್ದಿ ಇರುವುದಿಲ್ಲ, ನೀನು ೫೦ ವರ್ಷಗಳ ಕಾಲ ಬಾಳುತ್ತೀಯ..



ಇದಕ್ಕೆ ಕತ್ತೆ ಹೇಳಿತು ನಾನು ಕತ್ತೆಯಾಗಿ ಇರುತ್ತೇನೆ ಆದರೆ ೫೦ ವರ್ಷ ಹೆಚ್ಚು , ನನಗೆ ೨೦ ವರ್ಷ ಸಾಕು ಎಂದು ಕೇಳಿಕೊಂಡಿತು.  ದೇವರು ಕತ್ತೆಯ ಆಸೆಯನ್ನ ನೆರವೇರಿಸಿದ.
ಆನಂತರ ಒಂದು ನಾಯಿಯನ್ನ ಸೃಷ್ಠಿಸಿ, ಅದರ ಬಳಿ ಹೇಳಿದ, ನೀ ಮನುಜನ ಮನೆಯನ್ನ ಕಾಯುವ ಕಾವಲುಗಾರ, ಅವನ ಪ್ರೀತಿಗೆ ಪಾತ್ರನಾಗಿ ಇರುತ್ತೀಯ, ಅವನು ಉಂಡ ನಂತರ ನಿನಗೆ ನೀಡುತ್ತಾನೆ. ನೀ ೩೦ ವರ್ಷಗಳ ಕಾಲ ಬಾಳುತ್ತೀಯ.

ಅದಕ್ಕೆ ನಾಯಿ ಹೇಳಿತು ದೇವರೆ ೩೦ ವರ್ಷ ತುಂಬ ಹೆಚ್ಚು, ನನಗೆ ೧೫ ವರ್ಷ ಸಾಕು,ಎಂದು ಕೇಳಿಕೊಂಡಿತು. ದೇವರು ನಾಯಿಯ ಆಸೆಯನ್ನ ನೆರವೇರಿಸಿದ.*

ಆನಂತರ ದೇವರು ಕೋತಿಯನ್ನ ಸೃಷ್ಠಿಸಿ ಅದರ ಬಳಿ ಹೇಳಿದ. ನೀ ಒಂದು ಕೋತಿ ಮರಕ್ಕೆ ಮರ ಜಿಗಿಯಬೇಕು,ನೀ ಆಟಗಳನ್ನ ತೋರಿಸಿ ಜನರಲ್ಲಿ ಸಂತಸವನ್ನ ಮೂಡಿಸು,ನೀ ೨೦ ವರ್ಷಗಳ ಕಾಲ ಬಾಳುತ್ತಿಯ.
             

ಅದಕ್ಕೆ ಕೋತಿ ಹೇಳಿತು ೨೦ ವರ್ಷ ತುಂಬ ಹೆಚ್ಚು ೧೦ ವರ್ಷ ಸಾಕು ಎಂದು ಕೇಳಿಕೊಂಡಿತು.  ದೇವರು ಕೋತಿಯ ಆಸೆಯನ್ನ ನೆರವೇರಿಸಿದ.

ಆನಂತರ ಕೊನೆಯದಾಗಿ ಮನುಜರನ್ನ ಸೃಷ್ಠಿಸಿ ಅವನ ಬಳಿ ಹೇಳಿದ. ನೀನೊಬ್ಬ ಮನುಜ ಪ್ರಪಂಚದಲ್ಲಿನ ಆರು ಬುದ್ದಿಗಳನ್ನ ಪಡೆದು ಉಳಿದ ಪ್ರಾಣಿಗಳನ್ನ ಆಳುತ್ತೀಯ, ಪ್ರಪಂಚವೇ ನಿನ್ನ ಕೈಯಲ್ಲಿ, ನೀನು ೨೦ ವರ್ಷಗಳ ಕಾಲ ಬಾಳುತ್ತೀಯ.




ಅದಕ್ಕೆ ಮನುಜ ಹೇಳಿದ ೨೦ ವರ್ಷ ಎಂಬುದು ನನಗೆ ತುಂಬ ಕಡಿಮೆ.ಕತ್ತೆ ಬೇಡ ಎಂದ ೩೦ ವರ್ಷಗಳನ್ನ,ನಾಯಿ ಬೇಡ ಎಂದ ೧೫ ವರ್ಷಗಳನ್ನ,ಕೋತಿ ಬೇಡ ಎಂದ ೧೦ ವರ್ಷಗಳನ್ನ, ನನಗೆ ಕೊಟ್ಟು ಬಿಡು. ದೇವರು ಮನುಜನ ಆಸೆಯನ್ನ ನೆರವೇರಿಸಿದ...

ಅಂದಿನಿಂದ ಮನುಜ ಮೊದಲ ೨೦ ವರ್ಷಗಳನ್ನ ಸಂತೋಷದಿಂದ ಬಾಳುತ್ತಾನೆ ಮನುಜನಾಗಿ.

ಮದೆವೆಯಾಗಿ ಆನಂತರದ ೩೦ ವರ್ಷಗಳನ್ನ ಕತ್ತೆಯಾಗಿ ಎಲ್ಲಾ ಹೊಣೆಗಳನ್ನ ಎತ್ತಿ ಹಿಡಿದು ಹಗಲು ರಾತ್ರಿ ನೋಡದೆ ದುಡಿಯುತ್ತಾನೆ.

ಮಕ್ಕಳು ಬೆಳೆದು ದೊಡ್ಡವರಾದ ನಂತರ ೧೫ ವರ್ಷಗಳಿಗೆ ಅವನು ಮನೆಯ ನಾಯಾಗಿ ಇದ್ದು ಎಲ್ಲರನ್ನ ಕಾಯುತ್ತಾನೆ, ಎಲ್ಲರೂ ತಿಂದು ಮಿಕ್ಕಿದ್ದನ್ನ ತಿಂದು ಬದುಕುತ್ತಾನೆ.

ನಂತರ ವಯಸ್ಸಾಗಿ ನಿವೃತ್ತಿ ಹೊಂದಿದ ನಂತರ ಕೋತಿಯ ಹಾಗೆ ೧೦ ವರ್ಷಗಳಿಗೆ ಮಗನ ಮನೆಯಿಂದ ಮಗಳ ಮನೆಗೆ ಮಗಳ ಮನೆಯಿಂದ ಮಗನ ಮನೆಗೆ ಜಿಗಿಯುತ್ತ ತನ್ನ ಮೊಮ್ಮಕ್ಕಳಿಗೆ ಆಟಗಳನ್ನ ತೋರಿಸಿ ಸಂತಸಪಡಿಸುತ್ತಾನೆ.

ಈಗ ತಿಳಿಯಿತೇ ನಾವು ಏಕೆ ಹೀಗಿರುವೆವು ಎಂದು.ಇಷ್ಟ ಆದರೆ Share ಮಾಡಿ.
                                                  -unknown
                        Collection:Sagar R Ganechary

Click here follow option for more update

ಸಾರ್ವಬೌಮ ಕೃಷ್ಣದೇವರಾಯನು ಕೇಳಿದ ? ಗಳು.

ಸಾರ್ವಬೌಮ ಕೃಷ್ಣದೇವರಾಯನು ಕೇಳಿದ


*10 ಸರ್ವಶ್ರೇಷ್ಠ ಪ್ರಶ್ನೆಗಳಿಗೆ*
*ಅದ್ಬುತ ಉತ್ತರಗಳನ್ನು ಕೊಟ್ಟ*
*ಸಾಟಿಯಿಲ್ಲದ ತೆನಾಲಿ ರಾಮಕೃಷ್ಣ*

1.ವಿಶ್ವದಲ್ಲಿ ಎಲ್ಲಕ್ಕಿಂತಲೂ  ಸುಂದರವಾದ ನಿರ್ಮಾಣ ಯಾವುದು ?

ಉತ್ತರ: "ತಾಯಿ"

2.ಲೋಕದ ಸರ್ವಶ್ರೇಷ್ಠ ಪುಷ್ಪ ಯಾವುದು ?

ಉತ್ತರ: "ಹತ್ತಿ ಹೂವು"

3.ಬ್ರಹ್ಮ ಸೃಷ್ಟಿಯ ಈ ಭೂಮಂಡಲದಲ್ಲಿ ಸರ್ವಶ್ರೇಷ್ಠ ಸುಗಂಧ ಯಾವುದಿದೆ ?

ಉತ್ತರ: "ಮಳೆಯಿಂದ ತೊಯಿದ ಭೂಮಿಯ ಸುಗಂಧ".

4.ಜನರು ಇಷ್ಟ ಪಡುವ ಸರ್ವಶ್ರೇಷ್ಠ ಸಿಹಿ ಯಾವುದು ?

ಉತ್ತರ: "ಮಾತಿನ ಸಿಹಿ".

5.ಈ ಸೃಷ್ಟಿಯಲ್ಲಿ ಸರ್ವಶ್ರೇಷ್ಠ ಹಾಲು ಯಾವುದು ?

ಉತ್ತರ: "ತಾಯಿಯ ಹಾಲು".

6.ಎಲ್ಲಕ್ಕಿಂತಲೂ ಕಪ್ಪು ಯಾವುದು ?

ಉತ್ತರ: "ಕಳಂಕ".

7.ಅತ್ಯಂತ ಭಾರವಾದುದು ಯಾವುದು ?

ಉತ್ತರ: "ಪಾಪ"

8.ಅಗ್ಗವಾದ ವಸ್ತು ಯಾವುದು ?

ಉತ್ತರ: "ಸಲಹೆ"

9.ಜಗತ್ತಿನಲ್ಲಿ ಅತ್ಯಂತ ದುಬಾರಿ ವಸ್ತು ಯಾವುದು ?

ಉತ್ತರ:  "ಸಹಯೋಗ "

10.ಬ್ರಹ್ಮಾಂಡದಲ್ಲಿ ಬಹು ವಿಷಕಾರಿ ವಸ್ತು ಯಾವುದು ?

ಉತ್ತರ:" ಸತ್ಯ "

11.ಆಯುಷ್ಯ ವೆಂದರೆ ಏನು ?

ಉತ್ತರ: ಮನುಷ್ಯ ಹುಟ್ಟಿದಾಗ " ಹೆಸರು " ಇರಲ್ಲಾ ಕೇವಲ " ಶ್ವಾಸ" ಇರುತ್ತದೆ. ಸಾಯುವಾಗ ಹೆಸರು ಮಾತ್ರ ಇರುತ್ತದೆ " ಶ್ವಾಸ" ಇರುವುದಿಲ್ಲ. " ಹೆಸರು " ಮತ್ತು "ಶ್ವಾಸ" ಗಳ ಮಧ್ಯದಲ್ಲಿನ ಅಂತರವೇ " ಆಯುಷ್ಯ "•
                    Collection :Sagar R Ganechary

ನಿಮಗಿಷ್ಟವಾಗಿದ್ದರೆ ಇದನ್ನು ಇತರರಿಗೂ ಕಳುಹಿಸಿ.
Your valuable support :Share, Comment
Click here Follow Option for more updates
   

ವಯಸ್ಸು ಆಗಿದ_ಮೇಲೆ_ನೀವು_ಬದಲಾಗಿದ್ದೀರಾ?

ವಯಸ್ಸು ಆಗಿದ ಮೇಲೆ ನೀವು ಬದಲಾಗಿದ್ದೀರಾ?

ಹೌದು, ಬದಲಾಗಿದ್ದೇನೆ. ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು, ಈಗ ನನ್ನನ್ನು ಪ್ರೀತಿಸುವ ಸರಧಿ ಬಂದಿದೆ

ಹೌದು , ಬದಲಾಗಿದ್ದೇನೆ..ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ,,, ನನಗೂ ಮಿತಿಯಿದೆ

ಹೌದು ಬದಲಾಗಿದ್ದೇನೆ,, ತರಕಾರಿ, ಹಣ್ಣುಗಳನ್ನು ಚೌಕಾಸಿ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ...ಅದರಿಂದ ನನ್ನ ಕಿಸಿಯೇನು ಬರಿದಾಗುವುದಿಲ್ಲ,ಒಬ್ಬ ಬಡವ್ಯಾಪಾರಿಯ ಮಗಳ ಶಾಲಾ ಫೀಸ್ ತುಂಬಲು ಸಹಾಯವಾಗಬಹುದು

ಹೌದು ಬದಲಾಗಿದ್ದೇನೆ,,,ಒಬ್ಬ ಟ್ಯಾಕ್ಸಿ ಚಾಲಕನ ಹತ್ತಿರ ಚಿಲ್ಲರೆ ಕೇಳುವುದನ್ನು ನಿಲ್ಲಿಸಿದ್ದೇನೆ, ಅವನು ಬದುಕು ನನಗಿಂತ ಸಂಕಷ್ಟದಲ್ಲಿರಬಹುದು

ಹೌದು, ಬದಲಾಗಿದ್ದೇನೆ,,ಇತರರು ತಪ್ಪು ಮಾಡಬಹುದು, ಹಾಗೆಂದ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ, ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ..ನೆಮ್ಮದಿಯೆಂದರೆ ಪರಿಪೂರ್ಣತೆಗೂ ಮಿಗಿಲು

ಹೌದು, ಬದಲಾಗಿದ್ದೇನೆ,,, ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಾಹವನ್ನು ಪುಷ್ಠಿಗೊಳಿಸುತ್ತದೆ

ಹೌದು, ಬದಲಾಗಿದ್ದೇನೆ,,, ನನ್ನ ಅಂಗಿ ಚೂರು ಅರಿದಿದ್ದರೆ ಅಥವಾ ಕಲೆಯಾಗಿದ್ದರೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ..ಅದೇನೆ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು

ಹೌದು, ಬದಲಾಗಿದ್ದೇನೆ...ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದುಬಿಡುತ್ತೇನೆ...ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಇರಬೇಕು ಅಲ್ಲವೇ...

ಹೌದು, ಬದಲಾಗಿದ್ದೇನೆ..ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ...ಅವರೇ ಮುಂದೆ ಹೋಗಲಿ...ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ಧಿಯಲ್ಲ

ಹೌದು, ಬದಲಾಗಿದ್ದೇನೆ...ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯನೆನ್ನಿಸಿಕೊಂಡಿರುವುದು...

ಹೌದು, ನಾನು ಬದಲಾಗಿದ್ದೇನೆ...ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ..ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಅಹಂಕಾರ ದೊಡ್ಡದೇನಲ್ಲ

ಹೌದು, ಬದಲಾಗಿದ್ದೇನೆ..ಈ ಕ್ಷಣದಲ್ಲಿ ಬದುಕುವುದು ಕಲಿತಿದ್ದೇನೆ...ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಿರಬಹುದು

ಹೌದು..ಬದಲಾಗಿದ್ದೇನೆ..

ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ...ಇದು ನನ್ನ ಸಂತೋಷದ ಸರಧಿ...ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ...ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಎಂದರ್ಥ...


                                            -Unknown

                     Collection by:Sagar R Ganechary


Give your Support : Share,Comments
Click here Follow option for more updates

ಸಾಮಾಜಿಕ ನೀತಿ ಕಥೆ

ಬಟ್ಟೆ ಹೊಲಿಯುವವರ ಬಳಿ ಅತಿ 
ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.


ಒಂದು ಸೂಜಿ, ಇನ್ನೊಂದು ಕತ್ತರಿ.
ಇವೆರಡೂ ಜೊತೆಯಲ್ಲೇ ಇರುವುದಾದರೂ
 ಇವೆರಡರ ಸ್ವಭಾವ ಮಾತ್ರ ವಿರುದ್ಧ.

ಕತ್ತರಿ ಬಟ್ಟೆಯನ್ನು ಕತ್ತರಿಸಿ ತುಂಡು
 ತುಂಡು ಮಾಡುತ್ತದೆ. ಆದರೆ ಸೂಜಿ
ಆ ತುಂಡುಗಳನ್ನು ಜೋಡಿಸಿ ಒಂದುಗೂಡಿಸುತ್ತದೆ.

ಕತ್ತರಿಗೆ ಹೋಲಿಸಿದರೆ ಸೂಜಿ ಅತಿ
 ಚಿಕ್ಕ ವಸ್ತು. ಸಾಮಾಜಿಕವಾಗಿ ಇದರಿಂದ
ಒಂದು ನೀತಿ ಸಿಕ್ಕುತ್ತದೆ.

ಕೆಲವರು ಕತ್ತರಿಯಂತೆ ತಮಗೆ
 ಬೇಡವಾದುದನ್ನು ಕತ್ತರಿಸಿ ವಿಭಜಿಸುತ್ತಾರೆ.

ಅದು ಸಮಾಜವಾಗಬಹುದು.
ಸಂಸ್ಥೆಯಾಗಬಹುದು.
ಸಂಸಾರವೇ ಆಗಬಹುದು. ಸ್ನೇಹವೂ ಆಗಬಹುದು.

ಕತ್ತರಿಯ ಹರಿತಕ್ಕೆ ಒಳಗಾದವರು
ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ.

ಆದರೆ ಸೂಜಿ ಚಿಕ್ಕದಾದರೂ
 ಕೆಲಸ ನಿಧಾನವಾದರೂ ತುಂಡಾದುದನ್ನು
ಹೊಲಿದು ಜೋಡಿಸುವಂತೆ, ಸಜ್ಜನರು
ವಿಭಜಿತರನ್ನು ಒಂದುಗೂಡಿಸಲು
 ಪ್ರಯತ್ನಿಸುತ್ತಲೇ ಇರುತ್ತಾರೆ.

ಆದುದರಿಂದ ನಾವು ಸೂಜಿಯಂತಾಗಬೇಕು. ಕತ್ತರಿಯಂತಾಗಬಾರದು.

ಇದೇ ಸಾಮಾಜಿಕ ನೀತಿ.

ಇದನ್ನು ತಿಳಿದು ಬದುಕೋಣ.

ಮನುಷ್ಯನದು ಸ್ವಂತದ್ದು ಏನಿದೆ?

ಜನ್ಮ ಬೇರೆಯವರು ನೀಡಿದ್ದಾರೆ ..!
ಹೆಸರು ಬೇರೆಯವರು ಇಟ್ಟಿದ್ದಾರೆ.
ಶಿಕ್ಷಣ ಬೇರೆಯವರು ಕಲಿಸಿದ್ದಾರೆ..
ಕೆಲಸವು ಬೇರೆಯವರು ಕೊಟ್ಟಿದ್ದಾರೆ..
ನಾಳೆ ಸ್ಮಶಾನಕ್ಕೆ ಬೇರೆಯವರೇ ಹೊತ್ತುಕೊಂಡು ಹೋಗುತ್ತಾರೆ..!


ಹಾಗಾದರೆ,
ವ್ಯರ್ಥ ಅಹಂಕಾರ ಏಕೆ..?
ಯಾವಾಗಲೂ ಒಳ್ಳೆಯ ಕರ್ಮದ ಬಗ್ಗೆ ಯೋಚಿಸಬೇಕಲ್ಲವೇ...?
                        -Unknown
Collected Source:ಗೋಗಿ ಜಂಗಮ ಜ್ಯೋತಿ ಸಮಾಜ Watsapp Group
                    -Collection by Sagar R Ganechary

Click here Follow option for more updates

Swami Vivekananda Quotes



Swami Vivekananda Quotes and Thoughts to Help Your Inner Wisdom


We are what our thoughts have made us; 
so take care about what you think.Words are secondary.
 Thoughts live; they travel far.

                                                              -Swami Vivekananda

**********************************





*************************************************************


In one word, this ideal is that you are divine.

                                                                   -Swami Vivekananda
***********************************************************


**********************************************************
The world is the great gymnasium where we come to make ourselves strong.
                                                                    Swami Vivekananda 
**********************************************************


*********************************************************

Where can we go to find God if we cannot see Him in our own

 hearts and in every living being. 

                                                                     Swami Vivekananda
*******************************************************

***********************************************************
Truth can be stated in a thousand different ways, yet each one can be true.
                                                               Swami Vivekananda
******************************************************

          

 *******************************************************  


That man has reached immortality who is disturbed by nothing material.
                                                                    Swami Vivekananda
********************************************************************


**********************************************

The moment I have realized God sitting in the temple of every human body, the moment I stand in reverence before every human being and see God in him - that moment I am free from bondage, everything that binds vanishes, and I am free.
                                                                                                                                                                                  Swami Vivekananda



 ********************************************